ಭಕ್ತ ಬಂಧುಗಳೇ,
ಸುಮಾರು ನಾಲ್ಕು ತಲೆಮಾರಿನ ಹಿಂದೆ ನಮ್ಮ ಗ್ರಾಮದಲ್ಲಿ ನೆಲೆಯಾಗಿ ನಿಂತಿದ್ದ ಶ್ರೀ ರಾಮಲಿಂಗೇಶ್ವರ ದೇವರು ಮತ್ತು ಪರಿವಾರ ದೇವರು ಬಿಂತಲ ಮತ್ತು ಸುತ್ತಮುತ್ತಲಿನ ಊರಿನ ಜನರ ಆರಾಧ್ಯ ದೇವ-ದೈವಗಳು ಆಗಿದ್ದವು ಮತ್ತು ಗ್ರಾಮ ದೇವಸ್ಥಾನ ಆಗಿತ್ತು ಎಂದು ಆರೋಡ ಪತ್ರೆಯ ಮುಖಾಂತರ ಇತ್ತೀಚೆಗೆ ನಮ್ಮೆಲ್ಲರ ಗಮನಕ್ಕೆ ಬಂದಿತು. ದೈವದ ಆಳ್ವಿಕೆ ಸಹ ಆಗುತ್ತಿದ್ದು ಊರ-ಪರ ಊರ ಜನರಿಗೆ ನುಡಿಯನ್ನು ಕೊಡುತ್ತಿತ್ತು ಎಂದು ತಿಳಿದು ಬಂದಿದೆ .
ಸುಮಾರು ವರ್ಷಗಳ ಹಿಂದೆ ಯಾವದೋ ಕಾರಣದಿಂದ ದೇವಸ್ಥಾನ ಅವಸಾನ ಹೊಂದಿತು. ಹಿರಿಯರು ತಿಳಿಸುವ ಹಾಗೆ ಪೂಜೆ ಮಾಡುತ್ತ ಇದ್ದು. ಇದನ್ನು ಬಿಟ್ಟು ಬೇರಾವುದೇ ಮಾಹಿತಿ ಇರಲಿಲ್ಲ, ಈ ಹಿನ್ನೆಲೆಯಲ್ಲಿ ಊರಿನ ಹಿರಿಯ-ಕಿರಿಯ ಮತ್ತು ಎಲ್ಲರನ್ನೂ ಒಳಗೊಂಡು ಒಂದು ಸಮಿತಿ ರಚಿಸಿ ಆರೋಡ ಪ್ರಶ್ನೆ ನಡೆಸಲಾಯಿತು. ಅಲ್ಲಿ ಗಮನಕ್ಕೆ ಬಂದ ಸಂಗತಿ ಏನಂದರೆ ಇದು ಬಿಂತಲ ಮತ್ತು ಸುತ್ತಮುತ್ತಲಿನ ಗ್ರಾಮ ದೇವರಾದ ಶ್ರೀ ರಾಮ ಲಿಂಗೇಶ್ವರ ದೇವರು. ಈ ದೇವರ ಜೊತೆಗೆ ಪಂಜುರ್ಲಿ ಮತ್ತು ಕಲ್ಕುಡ ದೈವಗಳೂ ಹಾಗೆಯೇ ಜಟಕೇಶ್ವರ ಅಥವಾ ಜಟಿಕಾ ಮತ್ತು ಚೌಡಿ ದೇವಿ ಇರುವ ಸಾನಿಧ್ಯ ಅದೇ ರೀತಿಯಲ್ಲಿ ಬ್ರಹ್ಮ-ನಾಗ ದೇವರ ಸಾನಿಧ್ಯ ಇದ್ದು ಅದು ದೇವಸ್ಥಾನಕ್ಕೆ ಸಂಬಂಧಿಸಿದಂತೆ ಪ್ರತಿಷ್ಠೆ ಕಂಡಿದೆ ಮತ್ತು ಊರಿನವರು ಅದನ್ನು ನಂಬಿ ಆ ದೇವರಿಗೆ ನಡೆದುಕೊಳ್ಳುತ್ತಾ ಇದ್ದಾರೆ.
ಈಗ ಶ್ರೀ ರಾಮಲಿಂಗೇಶ್ವರ ಪಂಜುರ್ಲಿ, ಕಲ್ಕುಡ, ಜಟಿಕಾ ಮತ್ತು ಚೌಡಿ ದೇವರು ಮತ್ತು ದೈವಗಳ ಪ್ರತಿಷ್ಠೆ ಆಗಬೇಕಿದೆ. ಪ್ರಶ್ನಾ ಲಗ್ನದಲ್ಲಿ ಬಂದಂತೆ ಜಾಗದ ದೋಷ ನಿವೃತ್ತಿ ಮಾಡಿ ಪ್ರೇತಾಕರ್ಷಣೆ ಮತ್ತು ವಿಸರ್ಜನೆ ಕಾರ್ಯವು ಆಗಿದೆ ಅದರ ಜೊತೆಗೆ ಹತ್ತು ಸಾವಿರ ಸಂಖ್ಯೆಯಲ್ಲಿ ಸುದರ್ಶನ ಜಪ ಮತ್ತು ಅದರ ದಶಾರಿ ಹೋಮ ಮಾಡಲಾಗಿದೆ, ಶ್ರೀ ದೇವರ ಮೂರ್ತಿಯನ್ನು ಮರದ ರೂಪದಲ್ಲಿ ತಯಾರಿಸಬೇಕು ಎಂದು ಬಂದಿರುವ ಕಾರಣ ಕಾರ್ಕಳದ ಶಿಲ್ಲಿ ಒಬ್ಬರು ಮೂರ್ತಿ ನಿರ್ಮಾಣದ ಕೆಲಸವನ್ನು ಮಾಡುತ್ತ ಇದ್ದಾರೆ. ಉಳಿದ ದೇವರ ಪದ್ದ ಶಿಲೆಯ ಕೆತ್ತನೆಯ ಕಾರ್ಯ ಆಗುತ್ತ ಇದೆ. ದೇವಸ್ಥಾನದ ನಿರ್ಮಾಣ ಕಾರ್ಯ ಆರಂಭ ಆಗಿದ್ದು ಸುಮಾರು ಹತ್ತು ಲಕ್ಷ ರೂಪಾಯಿಯ ಕಟ್ಟಡ ಕಾರ್ಯ ಪ್ರಾರಂಭ ಆಗಿದೆ.
ನಮ್ಮದು ಒಂದು ಪುಟ್ಟ ಗ್ರಾಮ ದೇವಸ್ಥಾನದ ಕೆಲಸವನ್ನು ನಾವೆಲ್ಲರೂ ಮಾಡುತ್ತೇವೆ. ಆದರೆ ಒಂದು ದೇವಸ್ಥಾನ ನಿರ್ಮಾಣ ಆಗಬೇಕಾದರೆ ನೂರಾರು ಜನರ ಸಹಾಯ ಮತ್ತು ಸಹಕಾರ ಬೇಕು. ಏಪ್ರಿಲ್ ತಿಂಗಳ ಕೊನೆಗೆ ಅಥವಾ ಮೇ ತಿಂಗಳಿನಲ್ಲಿ ದೇವಸ್ಥಾನದ ಪ್ರತಿಷ್ಠೆ ಕಾರ್ಯ ಆಗುತ್ತದೆ. ಭಕ್ತ ಬಂಧುಗಳು ಉದಾರ ಮನಸ್ಸಿನಿಂದ ದೇಣಿಗೆ ನೀಡಿ ಶ್ರೀ ರಾಮಲಿಂಗೇಶ್ವರ ಮತ್ತು ಪರಿವಾರ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕೋರುತ್ತೇವೆ.
ಧನ್ಯವಾದಗಳೊಂದಿಗೆ, ಬಿಂತ್ತ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು.


0 Comments:
Post a Comment